ಮಕ್ಕಳ ಕನ್ನಡ ರಾಜ್ಯೋತ್ಸವ - ಗಂಧದಗುಡಿ
- Team Yuva
- Nov 2, 2022
- 1 min read
Updated: Nov 4, 2022
ಪುನೀತ್ ರಾಜಕುಮಾರ್ ಗಂಧದಗುಡಿ ಸಿನಿಮಾವನ್ನು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ತೋರಿಸಲಾಯಿತು. ಯುವ ಬೆಂಗಳೂರು ಟ್ರಸ್ಟ್‌ನ ಬೆಂಬಲಿತ ಶಾಲೆಗಳ 250 ಮಕ್ಕಳು ಮತ್ತು 20+ ಯುವ ಬೆಂಗಳೂರು ಸ್ವಯಂಸೇವಕರು PVR, ಒರಾಯನ್ ಮಾಲ್‌ನಲ್ಲಿ ಸಿನಿಮಾ ವೀಕ್ಷಿಸಿದರು.

ಯುವ ಬೆಂಗಳೂರು ಟ್ರಸ್ಟ್‌ನ ಸದಸ್ಯೆಯಾಗಿರುವ ಆಂಕರ್ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.
ಮಕ್ಕಳೊಂದಿಗೆ ಮಕ್ಕಳಾಗಿ ಆಂಕರ್ ಅನುಶ್ರೀ, ಶ್ರೀಮತಿ ಶ್ರೀದೇವಿ ಯುವರಾಜಕುಮಾರ್, ಶ್ರೀಮತಿ ಯಶಸ್ವಿನಿ ಮಾಸ್ಟರ್ ಆನಂದ್ ಮತ್ತು ಬೇಬಿ ವಂಶಿಕಾ ಆನಂದ್ (ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ) ಚಲನಚಿತ್ರ ವೀಕ್ಷಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ (ರಾಘವೇಂದ್ರ ರಾಜ್‌ಕುಮಾರ್ ಅವರ ಮಗ) ನಮ್ಮೊಂದಿಗೆ ಸೇರಿಕೊಂಡರು, ಅವರು ಚಲನಚಿತ್ರದ ಬಗ್ಗೆ ಮಕ್ಕಳಿಗೆ ಏನು ಇಷ್ಟವಾಯಿತು ಎಂದು ಮಕ್ಕಳ ಜೊತೆ ಸಂವಾದಿಸಿದರು.

"ಗಂಧದಗುಡಿ ಚಿತ್ರವನ್ನು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ವೀಕ್ಷಿಸಲು ಕರೆ ತನ್ನಿ ಮತ್ತು ಪ್ರಕೃತಿ ಮಾತೆಯನ್ನು ಆನಂದಿಸಿ" ಎಂದು ನಮ್ಮ ಯುವ ಬೆಂಗಳೂರು ಟ್ರಸ್ಟ್‌ನ ಸಂಸ್ಥಾಪಕ ಜಿ ಕಿರಣ್ ಸಾಗರ್ ಮನವಿ ಮಾಡಿದರು

Program Head - Sunil B Vijaykumar
Photography by - Naveen M D & Praveen S B
Comments